ಬೆಳಕಿನ ಆಚೆಗೆ, ಕತ್ತಲಿನ ಈಚೆಗೆ. ಇಣುಕಿ ನೋಡು ನೀ, ನಿನ್ನ ಅಂತರಾಳದಲಿ.
ಅತ್ತ ಕೌರವರು, ಇತ್ತ ಪಾಂಡವರು. ಮನಸ್ಸಿನೊಳಗಿಹುದು, ಕಲಹಗಳ ಕುರುಕ್ಷೇತ್ರ.
ಮಹಾಭಾರತವೀ ಜೀವನ. ನೀನೆ ಕೃಷ್ಣ, ಈ ಕಪಟ ನಾಟಕದ ಸೂತ್ರಧಾರಿ.