ನೇಗಿಲ ಹೂಡಿ,
ಅರಿವ ಬಿತ್ತಿ,
ಕೊಯ್ಲು ಮಾಡಿ,
ತೂರಿ, ಸಾನಿಸಿ,
ವಿಚಾರ ವಾದದ
ಸುಗ್ಗಿ ಮಾಡಿಲ್ಲ.
ಎಷ್ಟು
ದಿನಗಳಾಗಿವೆಯೊ,
ಸರ್ರನೆ ಗಾಳಿಗೆ,
ಮೈಯೊಡ್ಡಿ.
ಜೇಡ ಕಟ್ಟಿದ
ಎದೆ ಗೂಡಿಗೆ ಇದು
ಬೆಳಕ ತೋರಿಸಿಲ್ಲ.
ಕೈ ಕಾಲುಗಳ
ಕೀಲುಗಳಲ್ಲಿ ಜಂಗು.
ಹೊಳ್ಳೆಗಳಲ್ಲಿ ಗೆದ್ದಿಲು.
ಉಸ್ತುವಾರಿ ಇಲ್ಲದೆ,
ಸಂದು ಸಂದುಗಳಲ್ಲಿ,
ತುರಿಕೆ.
ದೇಹ ದೇಗುಲಕ್ಕೆ
ತಾನೇ ಕಳಶವೆಂಬ
ಬೂಟಾಟಿಕೆ ಬೇರೆ.
ಸರ್ಕಾರಿ ಬಾಬು ಹಾಗೆ
ಮೇಲೆ ಕುಳಿತಿದೆ.
ತಲೆಯಿದು,
ಹೇಲ ಗಡಿಗೆ.