ಗಿಡ ಮರ ಗುಡ್ಡಗಳ
ಸುಟ್ಟು ತಿನ್ನಬಲ್ಲ
ಆ ಬೆಂಕಿಗೆಷ್ಟು
ಹಸಿವಿರಬಹುದು.
ಇದ್ದ ಬಿದ್ದ ಬೆಳಕ,
ಹರಿದ ಮುರಿದ ಆಸೆಗಳ,
ನುಂಗಬಲ್ಲ ಆ ಕತ್ತಲಿಗೆಷ್ಟು,
ಹಸಿವಿರಬಹುದು.
ನಿಂತು, ನೀರವತೆಗೆ
ಕಾಯ್ದು. ಪುರಾವೆಗಳ
ಹೆಕ್ಕಿ ತಿಂದು.
ನೆನಪುಗಳ ಅಳಿಸುವ,
ಆ ಮರೆವಿನ ಹಸಿವು
ಹೆಚ್ಚೋ?
ಅಥವಾ, ಬೆಂಕಿ-ಬೆಳಕ,
ಮರೆವಿನ ಸೂರಲ್ಲಿ ಸಾಕಿ.
ಅವುಗಳ ಮೇಲೆ,
ರಾರಾಜಿಸುವ..
ಆ ಕಾಲಚಕ್ರದ
ಹಸಿವು ದೊಡ್ಡದೋ?