ಹೋದ ಕೆರೆ, ಬತ್ತಿ ಹೋಗಿತ್ತು.
ಮುಂಚೆ ಕಂಡ ಮರೀಚಿಕೆ,
ನದಿಯಾಗಿತ್ತೆ?
ಆಸರೆ ಬಯಸಿ ತಲುಪಿದ
ಸೂರು, ಬಿದ್ದು ಹೋಗಿತ್ತು.
ತಿರಸ್ಕರಿಸಿ ಬಂದ ಪಾಳು
ಮನೆಯಾಗಿತ್ತೆ?
ಅಂಟಿಕೊಂಡ ದಾರಿದ್ರ್ಯ
ಕಳೆಯಲು,
ನನ್ನಿಂದ ನಾನೇ ಓಡಿದೆ.
ಯಾರೂ ಕಾಣದ ದೂರದ
ಊರಲಿ,
ಯಾರ್ಯಾರೋ ಸಿಕ್ಕರು.
ತ್ಯಜಿಸಿ ಬಂದ ಆ ಅಯೊಗ್ಯ
ನಾನೇ ಆಗಿದ್ದೆನೆ?